Tuesday, October 18, 2011

ಭಟ್ಟರೇ ಸ್ವಲ್ಪ ಯೋಚಿಸಿ – ಇನ್ನಾದರು ಒಳ್ಳೆ ಸಿನಿಮಾಗಳನ್ನು ಕನ್ನಡಿಗರಿಗೆ ನೀಡಿ…

ಸಿನಿಮಾದಂತ ಪ್ರಭಾವಿ ಮಾಧ್ಯಮವನ್ನು ತಮ್ಮ ಇಷ್ಟಕ್ಕೆ ತಕ್ಕಂತೆ ಬಳಸಿ ಯುವಜನತೆಯ ಅಭಿರುಚಿಯನ್ನು ಮತ್ತಷ್ಟು ಕೆಳಕ್ಕೆ ತಳ್ಳುವ ಪ್ರಯತ್ನ ಯೋಗರಾಜ್ ಭಟ್ಟರು ಮಾಡುತ್ತಿದ್ದಾರೆ. ಒಂದು ಸಿನಿಮಾ ಅಂದರೆ ಬರೀ ಪಡ್ಡೆ ಹೈಕಳುಗಳನ್ನು ಸಿನಿಮಾ ಮಂದಿರಗಳಿಗೆ ಎಳೆತರುವ ಮತ್ತು ಹಣ ಗಳಿಸುವುದು ಅಂತಲೇ ಭಟ್ಟರು ತಿಳಿದಂತಿದೆ.
ನಮ್ಮ ಯೋಗರಾಜ್ ಭಟ್ಟರು ಸಾಹಿತ್ಯದ ಹೆಸರಲ್ಲಿ ಗುರುಗಳಿಗೆ, ಪೋಷಕರಿಗೆ ಅವಮಾನಕರ ಶಬ್ದಗಳನ್ನು ಬಳಸುತ್ತಿದ್ದಾರೆ. ಅವರ ಲೇಖನಿಯಿಂದ ಹೊಮ್ಮಿದ ಕೆಲವು ಪದಗಳು ಹೀಗಿವೆ, ಹೈಯಸ್ಟ್ ಮಾರ್ಕ್ಸ್ ಕೊಟ್ಟವನೇ ಲೂಸು, ನಮ್ಮಪ್ಪ ಪುಣ್ಯಾತ್ಮ ಅಂತ ಹೀಯಾಳಿಸುವುದು, ಇನ್ನೊಂದು ಹುಡುಗಿಯ ಫೋನ್ ನಂಬರ್ ಇಟ್ಕೊಂಡಿರು ಅಂತ ಹೇಳುವುದು, ಸಿನಿಮಾಗಳಿಂದ ಪ್ರೇರಿತರಾಗುವ ನಮ್ಮ ಯುವಕರು ಇಂತ ಉತ್ತೇಜಕ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅಧೋಗತಿ. ಹಾಡಿನ ಕೊನೆಯಲ್ಲಾದರು ನೀತಿ ಬೋಧದ ಮಾತು ಬೇಡವೇ.? ಭಟ್ಟರ ಸಿನಿಮಾಗಳೆಂದರೆ ಕೇವಲ ಕಾಲೇಜು ಮತ್ತು ಪಡ್ಡೆ ಗುಂಪಿಗೆ ಮಾತ್ರ ಮೀಸಲು ಅನ್ನುವ ರೀತಿಯಲ್ಲಿ ಬಿಂಬಿತವಾಗುತ್ತಿವೆ. ಪೋಷಕರು, ಹಿರಿಯರಿಗೆ ಅಂತ ಭಟ್ಟರು ಏನು ಕೊಡುಗೆ ಕೊಡಬಲ್ಲರು? ಮನೋರಂಜನೆ ಅಂದರೆ ಕೇವಲ ಒಂದು ಸಮುದಾಯಕ್ಕೆ ಮಾತ್ರ ಮೀಸಲೇ,? ಭಟ್ಟರು ಇನ್ನಾದರು ಒಳ್ಳೆ ಸಿನಿಮಾಗಳನ್ನು ನಿರ್ದೇಶಿಸಲಿ.



- ರಾಜೇಂದ್ರ ಅ.ಹುನಗುಂದ, ಕೊಪ್ಪಳ.

Monday, June 21, 2010

ನೆರೆ -ಹೊರೆ



Friends,




ಸಧ್ಯ ಕರ್ನಾಟಕದಲ್ಲಿ ತುಂಬಾ ಚಾಲ್ತಿಯಲ್ಲಿರುವ ಪದಗಳು. ಸ್ವಲ್ಪ ಗಂಭೀರವಾಗಿ ಯೋಚಿಸಿ ನೋಡಿ, ಈ ಪದಗಳು ಯಾವತ್ತೂ ತಮ್ಮ ಪ್ರಾಮುಖ್ಯತೆಯನ್ನು ಬಿಟ್ಟುಕೊಟ್ಟಿಲ್ಲ. ಕಳೆದ ವರ್ಷ ಹೆಚ್ಹು ಕಡಿಮೆ ಇದೆ ಸಮಯದಲ್ಲಿ ಇಡೀ ಉತ್ತರಕರ್ನಾಟಕ ನೆರೆಹಾವಳಿಯಿಂದ ತತ್ತರಿಸಿ ಹೋಗಿತ್ತು. ಸ್ವಲ್ಪ ನೆನಪು ಮಾಡ್ಕೊಳ್ಳಿ. ಆಗ ಎಲ್ಲರೂ ಇದರ ಬಗ್ಗೆ ಮಾತನಾಡುವವರು. ಎಲ್ರಿಗೂ modern ಮದರ್ ತೆರೇಸಾ ಆಗುವ ಬಯಕೇನೆ. ಸಂಪೂರ್ಣ ಭಾರತ ಹೇಳಿತ್ತು. " ಒಗ್ಗಟ್ಟು " ಅಂದ್ರೆ ಹೀಗಿರಬೇಕಪಾ ಕನ್ನಡದವರ ಥರ. ಒಂದೇ ಕಣ್ಣಲ್ಲಿ ಆನಂದಭಾಷ್ಪ ತಂದುಕೊಂಡು ಹೇಳಿದರು-ಕನ್ನಡಿಗರು ಎಂಥ ಕರುಣಾಮಯಿಗಳು ಅಂತ.


ಬೆಂಕಿ ಬಿತ್ತು ಇವರ ಕರುಣೆಗೆ. ಪಕ್ಕದ ಮನೆಯವನು ಉಪವಾಸ ಸಾಯ್ತಿದ್ರು ಹೊರಳಿ ನೋಡಲ್ಲ. ಅಷ್ಟೇ ಏಕೆ ? ಹುಟ್ಟಿಸಿದ ಅಪ್ಪ ಔಷಧಿ ಕೊಡಿಸು ಅಂತ ಕೇಳಿದರೂ ಸಂಬಳವಾಗಿಲ್ಲ ಅಂತ ಸುಳ್ಳು ಹೇಳೋ ದರಿದ್ರರು. ನೆರೆ ಸಂತ್ರಸ್ತರಿಗೆ ಹರಕಲಿ ಚಾಪೆ, ಮುರುಕಲು ದಿಂಬು ಕೊಟ್ಟು ತಮ್ಮ ಅಕೌಂಟಿಗೆ ಪುಣ್ಯ ಜಮಾ ಮಾಡ್ಕೊಲ್ಲೋ ದಾನಶೂರ ಕರ್ಣರು. ಎಲ್ಲರೂ ಎಂದರೆ ಎಲ್ಲರೂ ಮುಖ್ಯಮಂತ್ರಿಯಿಂದ ಹಿಡ್ಕೊಂಡು ಕಾಂಜಿಪಿಂಜಿವರೆಗೂ ಎಲ್ರೂ ನೆರೆಹಾವಳಿ ಹೆಸರು ಹೇಳ್ಕೊಂಡು ದುಡ್ಡು collect ಮಾಡೋರೆ. ದುರಂತ ಅಂದ್ರೆ ದುಡ್ಡು ಕೂಡಿಸುವುದರಲ್ಲಿ ಇವರಿಗೆ ಇರುವ ಕಾಳಜಿ ಅದನ್ನು ಸಂತ್ರಸ್ತರವರೆಗೂ ಮುಟ್ಟಿಸುವುದರಲ್ಲಿ ಇರಲ್ಲ. ದುಡ್ಡು ಕೊಟ್ಟೋರು ಕೂಡ ಪುಣ್ಯದ ಕಾರ್ಯದಲ್ಲಿ ತಮ್ಮದೊಂದು ಕೈ ಇದೆಯೆಂದು ಖುಷಿ ಪಡೋರೆ. ಅದಕ್ಕೆ ಹೇಳಿದ್ದು ಬೆಂಕಿ ಬಿತ್ತು ನಿಮ್ಮ ಕರುಣೆಗೆ ಅಂತ.


Wait !! ನಂಗೊತ್ತು ನೀವು ಕೊಡೊ ಕಾರಣ. ಕೆಲಸ ಇರುತ್ತೆ, ಸಂಸಾರ, ಮನೆ, ಮಕ್ಕಳು ಈ ತಾಪತ್ರಯ ಎಲ್ಲ ನಿಭಾಯಿಸಿಕೊಂಡು ಹೋಗೋಕೆ ಸಾಕಾಗುತ್ತೆ. ಊರು ಚಿಂತೆ ಮಾಡಿ ಮುಲ್ಲ ಸೊರಗಿದ ಹಾಗಾಗಿದೆ ಅಂತೀರ ಅಲ್ವ. ಈಗ ನಿಮಗೊಂದು interesting ವಿಷಯ ಹೇಳ್ತೀನಿ. ನಮ್ಮ ಕಡೆ ಒಂದು ಪುಟ್ಟ ಪಕ್ಷಿ ಇದೆ. ಹಳ್ಳಿಗರು ಅದನ್ನ ಕಬ್ಬಕ್ಕಿ ಅಂತ ಕರೆಯುತ್ತಾರೆ. ಅವು ಯಾವಾಗಲು ೭-೮ ಪಕ್ಷಿಗಳ ಗುಂಪಲ್ಲಿ ಇರುತ್ತವೆ. ಒಂದಕ್ಕೆನಾದರು ಅಪಾಯ ಬಂದರೆ ಉಳಿದೆಲ್ಲ ಪಕ್ಷಿಗಳು ಸೇರಿ ಅದನ್ನು ಉಳಿಸಲಿಕ್ಕೆ ಹೊರಡುತ್ತವೆ. ನಮ್ಮ ಜೀವ ಉಳಿದರೆ ಸಾಕಪ್ಪಾ ಅಂತ ಓಡಿ ಹೋಗಲ್ಲ. ಅದೇ ರೀತಿ ಪ್ರಕೃತಿ ನಮಗೂ ಕೂಡ ಪರಿಕ್ಷೆಗಳನ್ನಿಡುತ್ತೆ. ಅರ್ಥ ಮಾಡ್ಕೋಳ್ಳದ ಅವಿವೇಕಿಗಳು. ಕರುಣೆಗೆ ಆರಂಭಶೂರತ್ವ ಬೇಡ. ಅಂತಿಮ ಗುರಿನೂ ಇರಲಿ. ಇಲ್ಲದಿದ್ದರೆ ಅವಕಾಶವಾದಿಗಳು ನೆರೆ ಸಂತ್ರಸ್ತರ ಕರುಣೆಯಲ್ಲಿ ನೊರೆ ಉಕ್ಕಿಸಿಕೊಂಡು ಮಜಾ ಮಾಡುತ್ತಾರೆ.


Be aware !!




ಇವೆಲ್ಲ ಹೊಸ ವಿಷಯ ಅಲ್ಲಾ. ಆದ್ರೂ ನೆನಪಿಸುವವರು ಒಬ್ರು ಇಲ್ಲಾಂದ್ರೆ ಎಲ್ಲ ಸ್ಮೃತಿಪಟಲದಲ್ಲಿ ಜಾರಿಹೊಗುತ್ತೇನೋ ಎಂಬ ಭಯದಿಂದ ನೆನಪಿಸ್ತಾ ಇದೀನಿ.


Be humble & also Honest.

-ಶ್ರೀಸಾಮಾನ್ಯ

Sunday, June 20, 2010

ಸ್ವಲ್ಪ ತರಲೆ ...


1) 100 ವರ್ಷಗಳ ಕದನ ಎಷ್ಟು ವರ್ಷಗಳವರೆಗೆ ನಡೆಯಿತು .?


2) ಚೈನೀಸ್ ನೆಲ್ಲಿಕಾಯಿ ಯಾವ ದೇಶದಲ್ಲಿ ಬೆಳೆಯುತ್ತದೆ.?


೩) ರಷ್ಯನ್ನರು ಅಕ್ಟೋಬರ್ ಕ್ರಾಂತಿಯನ್ನು ಯಾವ ತಿಂಗಳಲ್ಲಿ ಆಚರಿಸುತ್ತಾರೆ.?


೪) ಇಂಡಿಯನ್ ಟೈಗರ್ಸ್ ಯಾವ ದೇಶದಲ್ಲಿ ಕಂಡುಬರುತ್ತವೆ ..?


೫) ವಿಮಾನದಲ್ಲಿರುವ ಬ್ಲಾಕ್ ಬಾಕ್ಸ್ ಯಾವ ಬಣ್ಣದಲ್ಲಿರುತ್ತದೆ ?


೬) ಪನಾಮ ಹ್ಯಾಟ್ ಗಳನ್ನು ಯಾವ ದೇಶದಲ್ಲಿ ತಯಾರಿಸುತ್ತಾರೆ..?














ಉತ್ತರಗಳು :

೧) 116

೨) ನ್ಯೂಜೆಲಂಡ್

೩) ಸೆಪ್ಟೆಂಬರ್

೪) ಆಫ್ರಿಕಾ

೫) ಕಿತ್ತಳೆ ಬಣ್ಣ

೬) ಇಕ್ವೆಡಾರ್




Wednesday, June 16, 2010

'ಸ್ವ 'ಗತ

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವುದು ಏನೋ ಉಳಿದು ಹೋಗಿದೆ
ಹೇಳಲಿ ಹೇಗೆ ತಿಳಿಯದಾಗಿದೆ..!!!
ಹೌದು .,
ನಿನ್ನನ್ನು ಜ್ಞಾಪಿಸ್ಕೊಬಾರದು, ನಿನ್ನ ಬಗ್ಗೆ ಗೀಚಕೂಡದು; Orkut ನಲ್ಲಿ ನಿನ್ನ Profile ನ್ನು ನೋಡಬಾರದು ಅಂತಲೂ ಅಂದ್ಕೋತೀನಿ !!! ಆದರೆ ಹಾಳಾದ್ದು ಸಿನಿಮಾಗಳ ಹಾಡುಗಳು ಇವ್ಯಲ್ಲಾ... ಹಳೆಯ ದಿನಗಳನ್ನು ಮತ್ತೆ ಮತ್ತೆ ನೆನಪಿಸುತ್ತವೆ, ಕಾಡಿಸುತ್ತವೆ.
ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿ ಮಾತು ಬರಿ ಮಾತು ಇನ್ಯಾಕೆ ಪ್ರೀತಿಯಲಿ
ನೋಟವೊಂದೆ ಸಾಕು ದಿನವೂ ಬೇರೆಯಲೇಬೇಕು
ಪ್ರೇಮಾಮೃತದ ಗೀತೆ ಬರೆಯೋಣ ಬಾ
ಈ ತರಹದ ಹಾಡುಗಳನ್ನು ಕೇಳುತ್ತಾ ಇದ್ದರೆ ಯಾವ ಅರಸಿಕ ತಾನೇ ರಸಿಕನಾಗಲಾರ ಹೇಳು???ಇನ್ನೂ ನೆನಪಿದೆ ನನಗೆ...ನನ್ನ ನಿನ್ನ ನಡುವಣ ಸೋ ಕಾಲ್ಡ್ ಲವ್ ಸ್ಟೋರಿ ಯನ್ನು ಹುಚ್ಚನಂತೆ ನಿನಗಾಗಿ ಅಂಕಣದಲ್ಲಿ ಬರೆಯುತ್ತಿದ್ದೆ..ನಿನ್ನನ್ನು ಕಳೆದುಕೊಂಡುದರ ದುಃಖವನ್ನು ಮರೆಯಲು ನನಗೆ ಆ ಅಂಕಣ ಕಾರಣವಾಗಿತ್ತು. ಅದರಲ್ಲೇನೋ ಖುಷಿ ಸಿಕ್ಕಿತ್ತು...ಸಿಗುತ್ತಿತ್ತು ! ಆದರೆ ಅದೊಂದು ದಿನ Orkut ನಲ್ಲಿ ಹಾಗೂ ಯಾಹೂ ನಲ್ಲಿ ಸಿಕ್ಕಿದ್ಯಲ್ಲಾ...
Dear I am not joking...I was feeling as if I am on Cloud Nine!!!! ಆದರೆ ...ಒಂದೆರಡು ದಿನಗಳ ಕಾಲ ಸಿಕ್ಕವಳು ನೀನು ಮತ್ತೆ ಎಲ್ಲಿ ಮಾಯವಾದೆ? ಮಾಯಾಂಗಿನಿಯಂತೆ !! ಇರುಳಲ್ಲಿ ಕಂಡ ಮಿಂಚುಲ್ಲಿಯಂತೆ..!!? ಸೂರ್ಯಾಸ್ತವಾಗುವ ಸಮಯದಲ್ಲಿ ಕೈಯಲ್ಲಿ ತಣ್ಣನೆಯ " ಬಯಕೆ " ಯ ಮಗ್ ಹಿಡಕೊಂಡು ನಿನ್ನ ಬಗ್ಗೆ ಯೋಚಿಸುತ್ತಿದ್ದೇನೆ. ಆ ದಿನಗಳು...ಆ ಸಂಜೆಗಳು...ಆ ಮಧುರ ಕ್ಷಣಗಳು! ನಿನ್ನ ಆ ಹುಸಿ ಕೋಪ...ನಿನ್ನನ್ನು ಸಂತೈಸಲು ನಾನು ಪಡುತ್ತಿದ್ದ ಕಷ್ಟಗಳು !!!ನಂತರ ನೀನು ಬೀರುತ್ತಿದ್ದ ನಗು!!! ನನಗೆ ಭಾಷೆ ಇಲ್ಲದಿರಬಹುದು....ಆದರೆ ನನ್ನಲ್ಲಿ ಭಾವನೆಗಳಿವೆ ಎಂಬುದನ್ನು ಮರೆಯಬೇಡ!!! ಜಾತಕ ಪಕ್ಷಿ ಮಳೆಯ ಹನಿ ಹನಿಗಾಗಿ ಕಾಯುತ್ತಿರುವಂತೆ ನಾನು ನಿನಗಾಗಿ ಕಾಯುತ್ತಿದ್ದೇನೆ.
ನಿನಗಾಗಿ ಪ್ರೀತಿಯಿಂದ ನಾನು...

Friday, June 11, 2010

ರಾಜು-ಒಬ್ಬ ಶ್ರೀಸಾಮಾನ್ಯ..

ಗೆಳೆಯರೇ,
ನನ್ನ ಹೆಸರು ರಾಜು, ನಾನು ಇತಿಹಾಸ ಪ್ರಸಿದ್ದ ಕೊಪಣಾಚಲದಿಂದ ಈ ಲೇಖನ ಬರೆಯುತ್ತಿದ್ದೇನೆ, ಭಾರತದ ಶ್ರೀಸಾಮಾನ್ಯನಿಗೆ ನಾನು ಅತ್ತ್ಯುತ್ತಮ ಉದಾಹರಣೆ. ಆದ್ದರಿಂದಲೇ ನನ್ನ ಈ ಬ್ಲಾಗಿನ ಹೆಸರು ಶ್ರೀಸಾಮಾನ್ಯ. ನಾನಿಲ್ಲಿ ನನ್ನ ಸುತ್ತಮುತ್ತ ನಡೆಯುವ ವಿಷಯಗಳನ್ನು ಮತ್ತು ಮುಖ್ಯವೆನಿಸುವ (ನನಗೆ), ಮುಖ್ಯವೆನಿಸದ (ನಮ್ಮೆಲ್ಲರಿಗೆ ) ಈ ಎಲ್ಲ ವಿಷಯಗಳ ಕುರಿತು ನಿಮ್ಮೊಂದಿಗೆ ಚರ್ಚಿಸುತ್ತೇನೆ. ದಯವಿಟ್ಟು ನೀವೆಲ್ಲಾ ನಿಮ್ಮ ಪ್ರತಿಕ್ರಿಯೆಯನ್ನು ನನ್ನೊಂದಿಗೆ ಈ ಬ್ಲಾಗಿನ ಮೂಲಕ ಅಥವಾ ನನ್ನ ಮೊಬೈಲ್ ನಂ. 09738068449 ಗೆ ಎಸ್.ಎಂ.ಎಸ್ ಮಾಡುವ ಮೂಲಕ ಹಂಚಿಕೊಳ್ಳುತ್ತೀರೆಂದು ಆಶಿಸುತ್ತೇನೆ.

ನಿಮ್ಮ ರಾಜು..