Monday, June 21, 2010

ನೆರೆ -ಹೊರೆ



Friends,




ಸಧ್ಯ ಕರ್ನಾಟಕದಲ್ಲಿ ತುಂಬಾ ಚಾಲ್ತಿಯಲ್ಲಿರುವ ಪದಗಳು. ಸ್ವಲ್ಪ ಗಂಭೀರವಾಗಿ ಯೋಚಿಸಿ ನೋಡಿ, ಈ ಪದಗಳು ಯಾವತ್ತೂ ತಮ್ಮ ಪ್ರಾಮುಖ್ಯತೆಯನ್ನು ಬಿಟ್ಟುಕೊಟ್ಟಿಲ್ಲ. ಕಳೆದ ವರ್ಷ ಹೆಚ್ಹು ಕಡಿಮೆ ಇದೆ ಸಮಯದಲ್ಲಿ ಇಡೀ ಉತ್ತರಕರ್ನಾಟಕ ನೆರೆಹಾವಳಿಯಿಂದ ತತ್ತರಿಸಿ ಹೋಗಿತ್ತು. ಸ್ವಲ್ಪ ನೆನಪು ಮಾಡ್ಕೊಳ್ಳಿ. ಆಗ ಎಲ್ಲರೂ ಇದರ ಬಗ್ಗೆ ಮಾತನಾಡುವವರು. ಎಲ್ರಿಗೂ modern ಮದರ್ ತೆರೇಸಾ ಆಗುವ ಬಯಕೇನೆ. ಸಂಪೂರ್ಣ ಭಾರತ ಹೇಳಿತ್ತು. " ಒಗ್ಗಟ್ಟು " ಅಂದ್ರೆ ಹೀಗಿರಬೇಕಪಾ ಕನ್ನಡದವರ ಥರ. ಒಂದೇ ಕಣ್ಣಲ್ಲಿ ಆನಂದಭಾಷ್ಪ ತಂದುಕೊಂಡು ಹೇಳಿದರು-ಕನ್ನಡಿಗರು ಎಂಥ ಕರುಣಾಮಯಿಗಳು ಅಂತ.


ಬೆಂಕಿ ಬಿತ್ತು ಇವರ ಕರುಣೆಗೆ. ಪಕ್ಕದ ಮನೆಯವನು ಉಪವಾಸ ಸಾಯ್ತಿದ್ರು ಹೊರಳಿ ನೋಡಲ್ಲ. ಅಷ್ಟೇ ಏಕೆ ? ಹುಟ್ಟಿಸಿದ ಅಪ್ಪ ಔಷಧಿ ಕೊಡಿಸು ಅಂತ ಕೇಳಿದರೂ ಸಂಬಳವಾಗಿಲ್ಲ ಅಂತ ಸುಳ್ಳು ಹೇಳೋ ದರಿದ್ರರು. ನೆರೆ ಸಂತ್ರಸ್ತರಿಗೆ ಹರಕಲಿ ಚಾಪೆ, ಮುರುಕಲು ದಿಂಬು ಕೊಟ್ಟು ತಮ್ಮ ಅಕೌಂಟಿಗೆ ಪುಣ್ಯ ಜಮಾ ಮಾಡ್ಕೊಲ್ಲೋ ದಾನಶೂರ ಕರ್ಣರು. ಎಲ್ಲರೂ ಎಂದರೆ ಎಲ್ಲರೂ ಮುಖ್ಯಮಂತ್ರಿಯಿಂದ ಹಿಡ್ಕೊಂಡು ಕಾಂಜಿಪಿಂಜಿವರೆಗೂ ಎಲ್ರೂ ನೆರೆಹಾವಳಿ ಹೆಸರು ಹೇಳ್ಕೊಂಡು ದುಡ್ಡು collect ಮಾಡೋರೆ. ದುರಂತ ಅಂದ್ರೆ ದುಡ್ಡು ಕೂಡಿಸುವುದರಲ್ಲಿ ಇವರಿಗೆ ಇರುವ ಕಾಳಜಿ ಅದನ್ನು ಸಂತ್ರಸ್ತರವರೆಗೂ ಮುಟ್ಟಿಸುವುದರಲ್ಲಿ ಇರಲ್ಲ. ದುಡ್ಡು ಕೊಟ್ಟೋರು ಕೂಡ ಪುಣ್ಯದ ಕಾರ್ಯದಲ್ಲಿ ತಮ್ಮದೊಂದು ಕೈ ಇದೆಯೆಂದು ಖುಷಿ ಪಡೋರೆ. ಅದಕ್ಕೆ ಹೇಳಿದ್ದು ಬೆಂಕಿ ಬಿತ್ತು ನಿಮ್ಮ ಕರುಣೆಗೆ ಅಂತ.


Wait !! ನಂಗೊತ್ತು ನೀವು ಕೊಡೊ ಕಾರಣ. ಕೆಲಸ ಇರುತ್ತೆ, ಸಂಸಾರ, ಮನೆ, ಮಕ್ಕಳು ಈ ತಾಪತ್ರಯ ಎಲ್ಲ ನಿಭಾಯಿಸಿಕೊಂಡು ಹೋಗೋಕೆ ಸಾಕಾಗುತ್ತೆ. ಊರು ಚಿಂತೆ ಮಾಡಿ ಮುಲ್ಲ ಸೊರಗಿದ ಹಾಗಾಗಿದೆ ಅಂತೀರ ಅಲ್ವ. ಈಗ ನಿಮಗೊಂದು interesting ವಿಷಯ ಹೇಳ್ತೀನಿ. ನಮ್ಮ ಕಡೆ ಒಂದು ಪುಟ್ಟ ಪಕ್ಷಿ ಇದೆ. ಹಳ್ಳಿಗರು ಅದನ್ನ ಕಬ್ಬಕ್ಕಿ ಅಂತ ಕರೆಯುತ್ತಾರೆ. ಅವು ಯಾವಾಗಲು ೭-೮ ಪಕ್ಷಿಗಳ ಗುಂಪಲ್ಲಿ ಇರುತ್ತವೆ. ಒಂದಕ್ಕೆನಾದರು ಅಪಾಯ ಬಂದರೆ ಉಳಿದೆಲ್ಲ ಪಕ್ಷಿಗಳು ಸೇರಿ ಅದನ್ನು ಉಳಿಸಲಿಕ್ಕೆ ಹೊರಡುತ್ತವೆ. ನಮ್ಮ ಜೀವ ಉಳಿದರೆ ಸಾಕಪ್ಪಾ ಅಂತ ಓಡಿ ಹೋಗಲ್ಲ. ಅದೇ ರೀತಿ ಪ್ರಕೃತಿ ನಮಗೂ ಕೂಡ ಪರಿಕ್ಷೆಗಳನ್ನಿಡುತ್ತೆ. ಅರ್ಥ ಮಾಡ್ಕೋಳ್ಳದ ಅವಿವೇಕಿಗಳು. ಕರುಣೆಗೆ ಆರಂಭಶೂರತ್ವ ಬೇಡ. ಅಂತಿಮ ಗುರಿನೂ ಇರಲಿ. ಇಲ್ಲದಿದ್ದರೆ ಅವಕಾಶವಾದಿಗಳು ನೆರೆ ಸಂತ್ರಸ್ತರ ಕರುಣೆಯಲ್ಲಿ ನೊರೆ ಉಕ್ಕಿಸಿಕೊಂಡು ಮಜಾ ಮಾಡುತ್ತಾರೆ.


Be aware !!




ಇವೆಲ್ಲ ಹೊಸ ವಿಷಯ ಅಲ್ಲಾ. ಆದ್ರೂ ನೆನಪಿಸುವವರು ಒಬ್ರು ಇಲ್ಲಾಂದ್ರೆ ಎಲ್ಲ ಸ್ಮೃತಿಪಟಲದಲ್ಲಿ ಜಾರಿಹೊಗುತ್ತೇನೋ ಎಂಬ ಭಯದಿಂದ ನೆನಪಿಸ್ತಾ ಇದೀನಿ.


Be humble & also Honest.

-ಶ್ರೀಸಾಮಾನ್ಯ

1 comment:

  1. hi raju yea, in some way i agree with your ideas but i think you hav to show the clear picture to what we hav to do i mean your are not giv the conclusion bt nice try iam with you in this campain keep it up

    ReplyDelete